Wednesday, March 18, 2009

"ವಿರೋಧಿಯಾದ ಸರ್ವಧಾರಿ"




" ಶಿಶಿರದ ನಿರ್ಗಮದಲ್ಲಿ ಎಲೆಗಳು ಉದುರಿ,

ವಸಂತದ ಆಗಮನದಿಂದ ಹೊಸ ಚಿಗುರು ಚಿಗುರಿ,

ಹೊಸ ಉತ್ಸಾಹಕೆ ನವ ಚೈತನ್ಯದ ಗರಿಗೆದರಿ,
ಉದಯಿಸುತಿದೆ ಸರ್ವಧಾರಿಯು ವಿರೋಧಿಯಾಗಿ..

ವಿರೋಧಿನಾಮ ಸಂವತ್ಸರ ವಿರೋಧಿಸಲಿ ಮಧ ಮತ್ಸರ,

ನಿರೋಧಿಸಲಿ ರೋಗ,ರುಜಿನ,ಬಿಬ್ಬತ್ಸಕರ,

ನಿಗ್ರಹಿಸಲಿ ಉಗ್ರರ ಉಪಟಳ,

ಅಳಿಸಲಿ ಜಾತಿ ಧರ್ಮಗಳ ಕಂದರ...


ನೀಗಿಸಲಿ ಬಡತನದ ಬವಣೆ ಚಿತ್ಕಾರ,

ನಶಿಸದೆ ಇರಲಿ ನಮ್ಮ ಸಂಸ್ಕೃತಿಯ ಸಾರ,

ಕರಗಿಸಲಿ ದುಃಖ ಅಜ್ಞಾನದ ಅಂಧಕಾರ,

ಪಸರಿಸಲಿ ಎಲ್ಲೆಲ್ಲು ಅಧ್ಯಾತ್ಮದ, ಪರಮಾರ್ತದ ಝೇಂಕಾರ..


ವಿರೋಧವಾಗದಿರಲಿ ಸ್ನೇಹದಲಿ,

ವಿರೋಧವಾಗದಿರಲಿ ಶಾಂತಿಯಲಿ,

ವಿರೋಧವಾಗದಿರಲಿ ಸಂಸ್ಕ್ರುತಿಯಲಿ,
ವಿರೋಧವಾಗದಿರಲಿ ಸತ್ಯಾ,ಧರ್ಮದಲಿ...


ಈ ಚೈತ್ರದ ಚಿಗುರು ಕೊಡಲಿ ನೆಮ್ಮದಿ,
ತರಲಿ ಈ ಯುಗಾಧಿಯು ಸಂತಸ,ಸಡಗರ,

ಉಗಮಿಸಲಿ ಹೊಸ ಆಶಯ,ನನಸಾಗಲಿ ಕನಸುಗಳ ಆಗರ,
ವಿರೋಧಿ ನಾಮ ಸಂವತ್ಸರವು ಮೊಡಿಸಲಿ ಮಂಧಹಾಸ ನಿರಂತರ.
"